ಇಡೀ ಬೆನ್ನನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಚಿ ಹಾಸನಭ್ಯಾಸವನ್ನು ಮಾಡುವುದರಿಂದ ಹಾಗೂ ನೋಡುಗರಿಗೆ ಇದು ವಕ್ರವಾಗಿ ಕಾಣುವುದರಿಂದ ವಕ್ರಾಸನ ಅಂತ ಕರೆಯುತ್ತಾರೆ.
ಮಾಡುವ ವಿಧಾನ :
- ದಂಡಾಸನದಲ್ಲಿ ಕುಳಿತು ಕಾಲುಗಳನ್ನು ಒಟ್ಟಿಗೆ ಜೋಡಿಸಿ, ನೇರವಾಗಿ ಕುಳಿತುಕೊಳ್ಳಬೇಕು.
- ಮೊದಲು ಬಲ ಮೊಣಕಾಲಿನ ಬಲಗಾಲನ್ನು ಮಡಚಿ ಎಡ ಮೊಣಕಾಲಿನ ಪಕ್ಕದಲ್ಲಿ ಇರಿಸಬೇಕು.
- ಸೊಂಟದಾ ಮೇಲ್ಭಾಗವನ್ನು ಪಕ್ಕಕ್ಕೆ ತಿರುಗುಸುತ್ತಾ ಬೆನ್ನಿನ ಭಾಗವನ್ನು ನೇರವಾಗಿ ಮಾಡಿಕೊಳ್ಳಬೇಕು. ಒಂದು ಕೈಯನ್ನು ಹಿಂದಕ್ಕೆ ಮತ್ತೊಂದು ಕೈಯನ್ನು ಮಂಡಿಯ ಹತ್ತಿರ ಇಟ್ಟುಕೊಳ್ಳಬೇಕು.
- ಹಿಂದಕ್ಕೆ ತೆಗೆದುಕೊಂಡು ಅಂಗೈಯನ್ನು ನೆಲದ ಮೇಲೆ ಇಡಬೇಕು.
- ಸಹಜ ಉಸಿರಾಟದೊಂದಿಗೆ ನಮ್ಮ ನಮ್ಮ ದೇಹಕ್ಕೆ ಸಾಧ್ಯವಾಗುವಷ್ಟು ಸಮಯ ಅದೇ ಸ್ಥಿತಿಯಲ್ಲಿ ಇದ್ದು ಮತ್ತೆ ದೇಹವನ್ನು ಮುಂದಕ್ಕೆ ತಂದು ಮತ್ತೊಂದು ಕಡೆಗೇ ತಿರುಗಿಸಬೇಕು.
ಎರಡೂ ಕಡೆ ಮಾಡಿದ ನಂತರ ದಂಡಾಸನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಬೇಕು.
ಪ್ರಯೋಜನಗಳು:
- ಸಕ್ಕರೆ ಖಾಯಿಲೆಗೆ ಅತ್ಯಂತ ಉಪಯುಕ್ತವಾದಂತ ಆಸನ ವಾಗಿದ್ದು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ.
- ಬೆನ್ನುಮೂಳೆ ಸದೃಢಗೊಗೊಳಿಸುತದೇು
ವಿಶೇಷ ಸೂಚನೆ:
ಇತ್ತೀಚೆಗೆ ಕಿಬ್ಬೊಟ್ಟೆ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದವಾರು ಇದನ್ನು ಮಾಡಬಾರದು.
ವಕ್ರಾಸನ ಚಿತ್ರ ಸೌಜನ್ಯ – ಶ್ರೀ ವಿವೇಕ್ ಕುಮಾರ್ ಶರ್ಮಾ