ಯೋಗದ ಮುಂಬಾಗಿಲು, ಸಿದ್ಧತೆ
ಡಾ॥ ಸುಶ್ರುತ ಎಸ್
ಸಹಾಯಕ ಪ್ರಾಧ್ಯಾಪಕ, ಅಮೃತ ವಿಶ್ವವಿದ್ಯಾಪೀಠ, ಕೊಯಮತ್ತೂರು
ಯೇಗದಾಗೆಲ್ಲ ಐತೆ ಬೆಳಗೆರೆ ಕೃಷ್ಣಶಾಸ್ತ್ರಿಗಳ ಹೊತ್ತುಗೆ ಕನ್ನಡಿಗರಿಗೆ ಹೊಸತೇ? ಅಜಿತಕುಮಾರರ ಯೋಗಪ್ರವೇಶವೂ ಕೆಲವರಿಗೆ ಪರಿಚಿತ. ಯೋಗ ಭೀಷ್ಮ ಪಿತಾಮಹರೆಂದೇ ಪ್ರಸಿದ್ಧರಾದ ಯೋಗಿ ಬಿ.ಕೆ.ಎಸ್ ಐಯ್ಯಂಗಾರರ ಯೋಗದೀಪಿಕಾ ಯೋಗ ಜಗತ್ತಿನ ಪ್ರಜೆಗಳಿಗೆ ಕೊಡಬಹುದಾದ ಉತ್ಕೃಷ್ಟ ಉಡುಗೊರೆ. ಇವುಗಳ ಉದಾಹರಣೆ ಕೇವಲ ನಮಗಿಂತ ಮುಂಚೆಯೇ ಗುರುಶಿಷ್ಯ ಪರಂಪರೆ ಈ ಕನ್ನಡ ನೆಲದಲ್ಲಿ ನಾವು ಕಂಡಂತೆಯೇ ಬಹಳ ದೊಡ್ಡದಿದೆ ಎಂಬುದರ ಉಲ್ಲೇಖಕ್ಕೆ ಮಾತ್ರ. ಅನುಭವಮಂಟಪದ ಶಿವಯೋಗ, ಅಕ್ಕಮಹಾದೇವಿಯಂತಹವರ ಯೋಗಿನೀ ಪರಂಪರೆ, ದಾಸ ಸಾಹಿತ್ಯದ ಭಾವೈಕ್ಯತೆಯ ಯೋಗ, ವೈದಿಕ ಪರಂಪರೆಯ ಗ್ರಂಥಗಳು, ಕಥೆ-ಸಾಹಿತ್ಯ; ಇವೆಲ್ಲವುಗಳ ಒಟ್ಟಾದ ಸಾಧನ ಮರ‍್ಗದ ಮರ‍್ತರೂಪವೇ ನಿಜವಾದ ಯೋಗ. ಶ್ವೇತಗಂಗೆಯಂತಹ ಈ ಯೋಗಕ್ಕೆ ಸ್ಥಾನ-ಮಾನ, ಜಾತಿ-ದೇಶ, ಲಿಂಗ-ವಯಸ್ಸು, ಭಾಷೆ-ಮತಗಳು ಅಡ್ಡ ಬಂದು, ಅಸಹ್ಯವಾಗದಂತೆ ನೋಡಿಕೊಳ್ಳುವುದು ಯೋಗಕುಲದೊಟ್ಟಿಗೆ ಗುರುತಿಸಿಕೊಳ್ಳುವ ನಮಗೆ ಅನಿವರ‍್ಯ. ಯೋಗ ಇವೆಲ್ಲವುಗಳನ್ನು ಮೀರಿದ್ದಾದರೂ, ಅಭ್ಯಾಸ ಮಾಡುವವರ ವ್ಯಕ್ತಿಗಳ ಮೇಲೆ ಈ ಸಣ್ತನದ ಪ್ರಭಾವ ಅತಿಸಹಜ, ಸ್ವಾಭಾವಿಕ.
ಯೋಗಕ್ಕೊಂದು ಅಚ್ಚುಕಟ್ಟಾದ ಬದಿಯನ್ನು ಕೊಟ್ಟು ಮಟ್ಟಮಾಡಿದ್ದು ಪತಂಜಲಿ ಮರ‍್ಷಿಗಳು. ಅವರ ಅರಿವಿನ ಗಾತ್ರಕ್ಕೆ ಸೂತ್ರರೂಪ ಸುಮಾರು ೨,೫೦೦ ರ‍್ಷಗಳ ಮುಂಚೆ. ಮರ‍್ಷಿಗಳ ಜ್ಞಾನವೃಕ್ಷದ ಕಾಂಡಗಳ ಹರಿವು ವ್ಯಾಕರಣ, ಆಯರ‍್ವೇದ ಮತ್ತು ಯೋಗಗಳೆಂಬ ದರ‍್ಶನಿಕ ಕ್ಷೇತ್ರಗಳಲ್ಲೆಂಬುದು ಭಾರತೀಯ ಜ್ಞಾನ ಪರಂಪರೆ(IಏS)ಯ ವಿದ್ವಾಂಸರ ದೃಢಾಭಿಮತ. ವೈದಿಕರ‍್ಶನಗಳಲ್ಲಿ ಒಂದಾದ ಸಾಂಖ್ಯ-ಯೋಗದ ಜೋಡಿಯನ್ನು ಸೆಕ್ಯುಲರ್ ಎಂಬ ಅಪರ‍್ಥ ಶಬ್ದದೊಂದಿಗೆ ಜೋಡಿಸಿ, ಭಾರತದೊಟ್ಟಿಗಿನ ನೆಂಟಸ್ತಿಕೆಯ ಬೇರುಗಳನ್ನು ಸಡಿಲಗೊಳಿಸುವ ಪ್ರಯತ್ನ ಹಿಂದಿಗಿಂತ ಹೆಚ್ಚಾಗಿ ನಡೆಯುತ್ತಿದೆ ಇಂದು. ಯೋಗದ ಮೂಲ ಅಪೌರುಷೇಯವಾದ ವೇದಗಳು ಎಂಬುದಕ್ಕೆ ಪ್ರಮಾಣಗಳು ಸಾಲು ಸಾಲು ಲಭ್ಯ. ಯೋಗದ ಕುಂಡಲಿಯನ್ನು ಬರೆಯಬೇಕಾದವರು ಯಾರು? ‘ಅಳವಡಿಸಿ, ಅನುಭವಿಸಿ, ರ‍್ಥೈಸಿ, ರ‍್ಪಣೆಗೆ ಸನ್ನದ್ಧರಾದ ಯೋಗಿಗಳೆ ಅಥವಾ ಬೌದ್ಧಿಕ ಚಟಕ್ಕೋ, ದೈಹಿಕ ತೃಷೆಗೋ ಕೆಲ ಕಾಲ ಮೈ ಬಗ್ಗಿಸಿ ಬೆಡಗನ್ನು ಹೊಗಳುವ ರ‍್ಧ ಬೆಂದು ದರ‍್ವಾಸನೆ ಪೂಸುವ ಮೈಗಳ್ಳರೆ’- ಎಂಬುದಕ್ಕೆ ದೇಶ, ಕಾಲ, ಪರಿಸ್ಥಿತಿಗಳೇ ಸಾಕ್ಷಿ. ಅಭ್ಯಾಸ ಮಾಡಿ, ವೈರಾಗ್ಯ ಹೊಂದಿ ಕೈವಲ್ಯದೆಡೆಗೆ ದಾಪುಗಾಲಿಗೆ ಸನ್ನದ್ಧರಾಗುವುದೇ ಯೋಗದ ಪರಮ ಲಕ್ಷ್ಯ. ಅದನ್ನೇ ಆರಂಭದಲ್ಲಿಯೇ ಮುನಿಪುಂಗವರು ಉಲಿದಿದ್ದಾರೆ ತಮ್ಮ ಸೂತ್ರದಲ್ಲಿ.
ಅನುಭವಿಸುವ ಸುಖ, ದುಃಖಗಳೇ ಮೊದಲಾಗಿ ಎಲ್ಲದಕ್ಕು ಯೋಗ್ಯತೆ ಮೂಲಭೂತವಾದ್ದರಿಂದ ಯೋಗಕ್ಕೂ ಯೋಗ್ಯತೆ ಬೇಕೇ? ಸಾರ‍್ಥ್ಯ ಬೇಕೇ? ಸಂರ‍್ಭಗಳು ಸಾಕೇ? ಇದನ್ನೇ ಶಾಸ್ತ್ರಗಳಲ್ಲಿ ಅಧಿಕಾರ ಎನ್ನುತ್ತಾರೆ, ಅಧಿಕೃತನೆಂದರೆ ಯೋಗ್ಯನು ಎಂಬುದು, ಅಧಿಕಾರಿಯು. ಈ ಅಧಿಕಾರವು ರಾಜಕೀಯದಲ್ಲಿರುವಂತೆ ಸ್ಥಾನವಿಶೇಷವಲ್ಲ, ಸಾರ‍್ಥ್ಯ-ಯೋಗ್ಯತೆಯ ಲಾಯಕ್ಕಿನ ಪ್ರಶ್ನೆ. ಈ ಕೆಲಸಕ್ಕೆ ಇವ ಯೋಗ್ಯನೆಂದರೆ, ಈ ಕೆಲಸಕ್ಕಿವನು ಅಧಿಕಾರಿ ಎಂಬುದು ಶಬ್ದಪ್ರಯೋಗ.
ಯೋಗಕ್ಕೆ ವಿಶೇಷ ಅಧಿಕಾರ ಅಥವಾ ಯೋಗ್ಯತೆ ಬೇಕೇ ಎಂಬುದು ಪ್ರಶ್ನೆಯಾದರೆ, ಉತ್ತರವಿಲ್ಲಿದೆ. ಹೌದು, ಯೋಗ್ಯತೆ ಬೇಕು. ಬೀಳುವಿಕೆಯಿಂದ ಬಿಡಿಸಿಕೊಳ್ಳುವ ತವಕ ಬೇಕು. ಸಾಧಿಸಬೇಕೆಂಬ ಮುಗ್ಧ ತೀವ್ರತೆ ಬೇಕು. ಬೆಳೆದು ಪ್ರಕೃತಿಯನ್ನು ಮೀರಿಸಬೇಕೆಂಬ ವಿವೇಕ ಬೇಕು. ದೊಡ್ಡದನ್ನು ದೊಡ್ಡ ಕಣ್ಗಳ ಬೆರಗಿನಿಂದ ನೋಡಿವ ಪುಳಕ ಬೇಕು. ಸಣ್ಣದನ್ನು ತುಚ್ಛವಾಗಿ ನೋಡದೆ ಜೊತೆಗೆ ಕರೆದೊಯ್ಯುವ ಕುಸುಮ ಮರ‍್ದವ ಬೇಕು. ಹಿರಿದಾದುದರ ಜೊತೆಗೂಡಿ ಕರಗುವ ವಿನಯ ಬೇಕು. ಗುಣ ನೋಡಿ ಗೌಣವಾಗುವ ಮಾನಸಿಕತೆ ಬೇಕು. ಬೇಡದ್ದನ್ನು ನರ‍್ಲಿಪ್ತನಾಗಿ ದೂಡುವ ಕಲೆ ಬೇಕು. ಬೇಕಾದ್ದನ್ನು ಮಾಡುವ, ಬೇಡದ್ದನ್ನು ಮಾಡದ ಸಂಯಮ ಬೇಕು. ಇದನ್ನು ಹೊರತಾಗಿ ಮೇಲೆ ತಿಳುಹಿಸಿದ ಒಂದು ಗುಣವನ್ನಾದರೂ ರೂಢಿಸಿಕೊಳ್ಳುವ ಶ್ರದ್ಧೆ ಇದ್ದರೆ ಅಧಿಕಾರಿಯೇ ಸರಿ. ಅಧಿಕಾರ ಬಂದೇ ಸಿದ್ಧ.
ಮುಂದಿನ ಕಂತುಗಳಲ್ಲಿ ಚರ್ಚಿಸುವ ಯೋಗದ ವಿಷಯ ಪ್ರವೇಶಕ್ಕೆ ಇಷ್ಟು ಶ್ರೀಗಣೇಶ.