ಯೋಗವಾಣಿ | kannada yogavani
Asaana of the Month

ವಕ್ರಾಸನ

ಇಡೀ ಬೆನ್ನನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಚಿ ಹಾಸನಭ್ಯಾಸವನ್ನು ಮಾಡುವುದರಿಂದ ಹಾಗೂ ನೋಡುಗರಿಗೆ ಇದು ವಕ್ರವಾಗಿ ಕಾಣುವುದರಿಂದ ವಕ್ರಾಸನ ಅಂತ ಕರೆಯುತ್ತಾರೆ.

ಮಾಡುವ ವಿಧಾನ :

  1. ದಂಡಾಸನದಲ್ಲಿ ಕುಳಿತು ಕಾಲುಗಳನ್ನು ಒಟ್ಟಿಗೆ ಜೋಡಿಸಿ, ನೇರವಾಗಿ ಕುಳಿತುಕೊಳ್ಳಬೇಕು.
  2. ಮೊದಲು ಬಲ ಮೊಣಕಾಲಿನ ಬಲಗಾಲನ್ನು ಮಡಚಿ ಎಡ ಮೊಣಕಾಲಿನ ಪಕ್ಕದಲ್ಲಿ ಇರಿಸಬೇಕು.
  3. ಸೊಂಟದಾ ಮೇಲ್ಭಾಗವನ್ನು ಪಕ್ಕಕ್ಕೆ ತಿರುಗುಸುತ್ತಾ ಬೆನ್ನಿನ ಭಾಗವನ್ನು ನೇರವಾಗಿ ಮಾಡಿಕೊಳ್ಳಬೇಕು. ಒಂದು ಕೈಯನ್ನು ಹಿಂದಕ್ಕೆ ಮತ್ತೊಂದು ಕೈಯನ್ನು ಮಂಡಿಯ ಹತ್ತಿರ ಇಟ್ಟುಕೊಳ್ಳಬೇಕು.
  4. ಹಿಂದಕ್ಕೆ ತೆಗೆದುಕೊಂಡು ಅಂಗೈಯನ್ನು ನೆಲದ ಮೇಲೆ ಇಡಬೇಕು.
  5. ಸಹಜ ಉಸಿರಾಟದೊಂದಿಗೆ ನಮ್ಮ ನಮ್ಮ ದೇಹಕ್ಕೆ ಸಾಧ್ಯವಾಗುವಷ್ಟು ಸಮಯ ಅದೇ ಸ್ಥಿತಿಯಲ್ಲಿ ಇದ್ದು ಮತ್ತೆ ದೇಹವನ್ನು ಮುಂದಕ್ಕೆ ತಂದು ಮತ್ತೊಂದು ಕಡೆಗೇ ತಿರುಗಿಸಬೇಕು.

ಎರಡೂ ಕಡೆ ಮಾಡಿದ ನಂತರ ದಂಡಾಸನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಬೇಕು.

ಪ್ರಯೋಜನಗಳು:

  1. ಸಕ್ಕರೆ ಖಾಯಿಲೆಗೆ ಅತ್ಯಂತ ಉಪಯುಕ್ತವಾದಂತ ಆಸನ ವಾಗಿದ್ದು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ.
  2. ಬೆನ್ನುಮೂಳೆ ಸದೃಢಗೊಗೊಳಿಸುತದೇು

ವಿಶೇಷ ಸೂಚನೆ:

ಇತ್ತೀಚೆಗೆ ಕಿಬ್ಬೊಟ್ಟೆ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದವಾರು ಇದನ್ನು ಮಾಡಬಾರದು.

ವಕ್ರಾಸನ ಚಿತ್ರ ಸೌಜನ್ಯ – ಶ್ರೀ ವಿವೇಕ್ ಕುಮಾರ್ ಶರ್ಮಾ

Related posts

ಜೀವಟspaceವ್ಯಾಖ್ಯಾನ

admin
3 years ago

ಭಗವದ್ಗೀತೆಯಲ್ಲಿ ಯೋಗ

admin
3 years ago

ಇಂಡಿಯನ್ ಯೋಗ ಅಸೋಸಿಯೇಷನ್ IYA ನ ಕಾರ್ಯಕಾರಿ ಮಂಡಳಿಯ 36 ನೇ ಸಭೆಯುಜುಲೈ 3, 2023 ರಂದು, ಸಂಜೆ 5.30 ರಿಂದ 6.00 ಗಂಟೆಯವರಗೆ ಆನ್‌ಲೈನ್‌ನಲ್ಲಿ ನಡೆಯಿತು.

admin
3 years ago
Exit mobile version