ಸೇತು ಬಂಧ ಆಸನ
ಇತ್ತೀಚಿನ ಅಂತರ್ಜಾಲ ಜಗತ್ತಿನಲ್ಲಿ, ಪ್ರತಿಯೊಬ್ಬ ಮನುಷ್ಯನು ಸದಾ ಕುಳಿತುಕೊಂಡು ಕೆಲಸ ಮಾಡುವುದರಿಂದ ಮನುಷ್ಯನ ಬೆನ್ನು ಮೂಳೆಯ ಆರೋಗ್ಯದ ಮೇಲೆ ಪರಿಣಾಮವು ತುಂಬಾ ಆಗುತ್ತಿದೆ. ಬೆನ್ನು ಮೂಳೆಯನ್ನು ಪ್ರಬಲಗೊಳಿಸಲು ಮತ್ತು ಗಟ್ಟಿಯಾಗಿಸಲು ಸೇತು ಬಂಧ ಆಸನವು ತುಂಬಾ ಉತ್ತಮವಾಗಿದೆ.
ಸೇತು ಬಂಧ ಎಂಬ ಪದವು ಸೇತು ಅಂದರೆ ಸೇತುವೆ ( bridge), ಬಂಧ ಎಂದರೆ ಬೀಗ ( Lock ), ಆಸನ ಎಂದರೆ ಭಂಗಿ ( Posture ) ಎಂಬ ಸಂಸ್ಕೃತ ಪದಗಳಿಂದಾಗಿದೆ.
ಈ ಆಸನದಲ್ಲಿ ನಾವು ಆಸನದ ಭಂಗಿಯನ್ನು ಪ್ರಯತ್ನಿಸಿದಾಗ ನಮ್ಮ ದೇಹವು ಸೇತುವೆಯಂತೆ ಕಾಣಿಸುತ್ತದೆ.
ಸೇತು ಬಂಧಾಸನದ ಪ್ರಯೋಜನಗಳು
- ಸೇತು ಬಂಧಾಸನ ನಿಮ್ಮ ಬೆನ್ನಿನ ಸ್ನಾಯುಗಳನ್ನು ಬಲಿಷ್ಠ ಮಾಡುತ್ತದೆ ಮತ್ತು ದಣಿದ ಬೆನ್ನನ್ನು ತಕ್ಷಣವೇ ಚೇತರಿಸುತ್ತದೆ.
- ಎದೆ, ಕುತ್ತಿಗೆ ಮತ್ತು ಬೆನ್ನು ಮೂಳೆಯನ್ನು ವಿಶಾಲವಾಗಿ ವಿಸ್ತರಿಸುವುದರಿಂದ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ.
- ಮೆದುಳಿಗೆ ಶಾಂತತೆಯನ್ನು ನೀಡುತ್ತದೆ. ಆತಂಕ , ಒತ್ತಡ ಮತ್ತು ಖಿನ್ನತೆ ಮಟ್ಟವನ್ನು ಕಡಿಮೆ ಮಾಡುತ್ತದೆ.
- ಸೇತು ಬಂಧಾಸನವು ನಿಮ್ಮ ಶ್ವಾಸಕೋಶವನ್ನು ತೆರೆದುಕೊಳ್ಳುವಂತೆ ಮಾಡುತ್ತದೆ ಮತ್ತು ಥೈರಾಯ್ಡ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
- ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ.
- ಋತು ಸಂಬಂಧಿತ ಮತ್ತು ಮುಟ್ಟಿನ ಸಮಯದಲ್ಲಿ ಆಗುವ ನೋವನ್ನು ಶಮನಗೊಳಿಸುತ್ತದೆ.
- ಆಸ್ತಮಾ, ಆಸ್ಟಿಯೋಪೋರೋಸಿಸ್ ಮತ್ತು ಸೈನೆಟಿಸ್, ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ.
- ಈ ಯೋಗಾಸನವು ದಣಿದ ಕಾಲುಗಳಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ.
ಎಚ್ಚರಿಕೆ – ಯೋಗ ತರಬೇತುದಾರ ಮೇಲ್ವಿಚಾರಣೆಯಲ್ಲಿ ಆಸನಗಳನ್ನು ಅಭ್ಯಾಸ ಮಾಡಿರಿ.
ಲೇಖಕಿ: ಪ್ರಿಯಾಂಕಾ ಕುಲಕರ್ಣಿ
ಸೇತು ಬಂಧಾಸನ ಚಿತ್ರ ಸೌಜನ್ಯ – ಸುಶ್ರೀ ಪ್ರಿಯಾಂಕಾ ಕುಲಕರ್ಣಿ