Sense the yoga online – ಯೋಗವನ್ನು ಆನ್‌ಲೈನ್‌ನಲ್ಲಿ ಗ್ರಹಿಸಿ!
- ಸೀನಿಯರ್ ಯೋಗ ಥೆರಪಿಸ್ತ್ ಹಾಗು ಯೋಗಭಾರತಿಯ ಶಿಕ್ಷಣ ವಿಭಾಗದ ಹಿರಿಯರು ಆಗಿರುವ ವಿಜಯ್ ಹರಿಹರನ್ ರವರು ಮಾತನಾಡಿ ಬೆನ್ನು ನೋವು ಮತ್ತು ಕುತ್ತಿಗೆನೋವು ನಿವಾರಣೆ ಮಾಡಿಕೊಳ್ಳಲು ಇಂಟಿಗ್ರೇಟೆಡ್ ಯೋಗ ಅನ್ನೋ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಈ ಕಾರ್ಯಾಗಾರದಲ್ಲಿ ವಿಜಯ್ ಹರಿಹರನ್ ಮಾತನಾಡಿ ನಮ್ಮ ಬೆನ್ನು ನೋವು ಮತ್ತು ಕುತ್ತಿಗೆ ನೋವಿಗೆ ಕಾರಣಗಳು ಏನು? ಹಾಗೂ ಅವುಗಳನ್ನು ಅತ್ಯಂತ ಸರಳ ಯೋಗ ಅಭ್ಯಾಸದಿಂದ ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಅನ್ನೋ ಸಮಗ್ರ ಮಾಹಿತಿಯ ಕಾರ್ಯಾಗಾರವನ್ನು ದಿನಾಂಕ: 26ನೇ ಆಗಸ್ಟ್ ಮತ್ತು 27ನೇ ಆಗಸ್ಟ್ 2023 ರಂದು ಬೆಳಿಗ್ಗೆ 11 ಗಂಟೆಯಿಂದ 11.45 ಗಂಟೆಯ ತನಕ ನಡೆಸಿಕೊಟ್ಟರು.
- ಡಾಕ್ಟರ್ ಶೃತಿ ಎಸ್. ಶೆಟ್ಟಿ ಬಿ.ಎ.ಎಂ.ಎಸ್. ಎಂ.ಡಿ.(ಆರ್ಯುವೇದ) ಅಸಿಸ್ಟೆಂಟ್ ಪ್ರೋಫೆಸರ್ ಕಾಹೇರ್ಸ್ ಶ್ರೀ ಬಿ.ಎಂ.ಕನಕವಾಡಿಯ ಆರ್ಯುವೇದ ಮಹಾವಿದ್ಯಾಲಯ ಶಹನಾಪುರ, ಬೆಳಗಾವಿ. ಇವರು ಸಹ ಬೆನ್ನು ಮತ್ತು ಕುತ್ತಿಗೆ ಸಮಸ್ಯೆಗಳಿಗೆ ಆರ್ಯುವೇದ ಮತ್ತು ಯೋಗ ಚಿಕಿತ್ಸೆಯ ವಿಧಾನವನ್ನು ಅತ್ಯಂತ ವೈಜ್ಞಾನಿಕವಾಗಿ, ಸವಿವರವಾಗಿ ತಿಳಿಸಿಕೊಟ್ಟರು.
- ಡಾಕ್ಟರ್ ಗಾಯತ್ರಿ ಪಿ. ನಾಯಕ್, ಅಸಿಸ್ಟೆಂಟ್ ಪ್ರೋಫೆಸರ್ ಜೆ.ಜಿ.ಕೋಆಪರೇಟೀವ್ ಹಾಸ್ಪಿಟಲ್ ಸೋಸೈಟಿಯ ಸ್ವಾಸ್ಥಾವೃತಾ ವಿಭಾಗ, ಆರ್ಯುವೇದ ಮೆಡಿಕಲ್ ಕಾಲೇಜ್ ಘಟಪ್ರಭಾ. ರವರು “ನಮ್ಮ ಜೀವನ ಶೈಲಿ ಹಾಗು ಪಥ್ಯವನ್ನು ಅಳವಡಿಸಿಕೊಳ್ಳುವುದರಿಂದ ಸರ್ವೈಕಲ್ ಮತ್ತು ಬೆನ್ನು ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಅನ್ನುವ ಕಾರ್ಯಾಗಾರವನ್ನು ನಡೆಸಿಕೊಟ್ಟರು.
- ಕಾರ್ಯಾಗಾರದಲ್ಲಿ ಡಾಕ್ಟರ್ ಗಾಯತ್ರಿ ರವರು ಬೆನ್ನು ನೋವು ಮತ್ತು ಸರ್ವೈಕಲ್ ಸಮಸ್ಯೆ ಅಂದರೆ ಏನು? ಅದು ಯಾತಕ್ಕಾಗಿ ನಮ್ಮನ್ನು ಕಾಡುತ್ತದೆ ಅನೋ ವೈಜ್ಞಾನಿಕ ಮಾಹಿತಿಯನ್ನು ನೀಡಿದರು. ವಿಶೇಷವಾಗಿ ಈ ಸಮಸ್ಯೆಗಳಿಂದ ಹೊರಬರಲು ನಾವು ನಮ್ಮ ಜೀವನ ಶೈಲಿ ಅನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಮತ್ತು ನಮ್ಮ ಆಹಾರದಲ್ಲಿನ ಪಥ್ಯ ಹೇಗಿರಬೇಕು ಅನ್ನೋ ಉಪಯುಕ್ತ ಮಾಹಿತಿ ಅನ್ನೂ ನೀಡಿದರು.