ಯೋಗವಾಣಿ | kannada yogavani
English Articles

ವೃದ್ಧರ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ಯೋಗದ ಪಾತ್ರ 

ನಮ್ಮ ಜೀವನದ ಮುಪ್ಪಿನಲ್ಲಿ, ಜೀವಾತ್ಮವನ್ನು ಪರಮಾತ್ಮನೊಂದಿಗೆ ಸಂಧಿಸುವ ಮಹತ್ವದ ಕಾಲ ಘಟ್ಟದಲ್ಲಿ ನಮ್ಮ ದೇಹ ಯೋಗ ಸಾಧನೆಗೆ ಸಹಕರಿಸದೆ ಪ್ರತಿನಿತ್ಯ ನಾನಾ ವಿಧದ ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳು ನಮ್ಮನ್ನು ಕಾಡುತ್ತಾ ಅನಾರೋಗ್ಯದ ತುತ್ತ ತುದಿಗೆ ತಲುಪಿಸುತ್ತದೆ. ಅದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸರಳವಾದ ಯೋಗಾಭ್ಯಾಸವು ವಯಸ್ಸಾದ ವ್ಯಕ್ತಿಗಳಿಗೆ ಸಂಜೀವನಿ ಅಂದರೆ ಅತಿಶಯೋಕ್ತಿ ಅನ್ನಿಸುವುದಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ಆರೋಗ್ಯಕರ, ಸಂತೋಷದ ಜೀವನವನ್ನು ನಡೆಸಲು ಸಹಾಯ ಮಾಡುವ ಮೌಲ್ಯಯುತ ಸಾಧನವಾಗಿ ಹೊರಹೊಮ್ಮಿದ ಅಂತಹ ಕೆಲವು ರೋಗಗಳಿಗೆ ಯೋಗಾಭ್ಯಾಸದ ಆಯಾಮಗಳು ಯಾವ ರೀತಿ ವೈಜ್ಞಾನಿಕವಾಗಿ ಉಪಯೋಗ ಆಗುತ್ತವೆ ಅನ್ನುವುದನ್ನು ನೋಡೋಣ ಬನ್ನಿ.


1. ಸಂಧಿವಾತ: ಸಂಧಿವಾತವು ವಯಸ್ಸಾದವರಲ್ಲಿ ಸರ್ವೇ ಸಾಮಾನ್ಯವಾದ ಖಾಯಿಲೆ ಆಗಿದೆ. ಕೀಲು ನೋವು ಮತ್ತು ಚಲನಶೀಲತೆಯನ್ನು ಕಡಿಮೆ ಮಾಡುತ್ತದೆ. ಇಂತಹ ಸಮಯದಲ್ಲಿ ಯೋಗಾಭ್ಯಾಸದ ಪ್ರಥಮ ಹಂತವಾದ ಸೂಕ್ಷ್ಮ ವ್ಯಾಯಮವು ಮತ್ತು ಚಲನೆಗಳ ಅಭ್ಯಾಸದಿಂದ ನಮ್ಮಲ್ಲಿ ಚಲನಶೀಲತೆಯನ್ನು ಹೆಚ್ಚಿಸಿ, ಕೀಲುಗಳಲ್ಲಿನ ನೋವನ್ನು ನಿವಾರಣೆ ಮಾಡಿ ಸಂಧಿವಾತವನ್ನು ದೂರ ಮಾಡುತ್ತದೆ ಅಂದರೆ ಅತಿಶಯೋಕ್ತಿ ಅನ್ನಿಸುವುದಿಲ್ಲ.


2. ಆಸ್ಟಿಯೊಪೊರೋಸಿಸ್: ನಮಗೆ ವಯಸ್ಸಾದಂತೆ ಮೂಳೆಯ ಸವೆತದಿಂದ ಶಕ್ತಿ ತಾನೇ ತಾನಾಗಿ ಕಮ್ಮಿ ಆಗಿಬಿಡುತ್ತದೆ. ಇಂತಹ ಸಮಯದಲ್ಲಿ ಯೋಗಾಭ್ಯಾಸದ 3ನೇ ಹಂತವಾದ ಆಸನಾಭ್ಯಾಸಗಳಾದ ಪರ್ವತಾಸನ ಮತ್ತು ವೃಕ್ಷಾಸನದಂತಹ ಸಮತೋಲನ ಭಂಗಿಗಳು ಮೂಳೆಗಳನ್ನು ಬಲಪಡಿಸಲು ಮತ್ತು ಆಸ್ಟಿಯೊಪೊರೋಸಿಸ್-ಸಂಬಂಧಿತ ಮುರಿತಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಹೃದಯದ ಆರೋಗ್ಯ: ಹೃದಯರಕ್ತನಾಳದ ಸಮಸ್ಯೆಗಳು ವಯಸ್ಸಾದವರಿಗೆ ಸರ್ವೇ ಸಾಮಾನ್ಯ. ಇಂತಹ ಸಮಯದಲ್ಲಿ ಯೋಗಾಭ್ಯಾಸದ 4ನೇ ಹಂತವಾದ ಪ್ರಾಣಾಯಾಮ ಅಭ್ಯಾಸವಾದ ನಾಡಿಶುದ್ಧಿ ಪ್ರಾಣಾಯಾಮ ಮತ್ತು ಭ್ರಾಮರಿ ಅಂತಹ ಉಸಿರಾಟದ ಅಭ್ಯಾಸಗಳು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತ ಪರಿಚಲನೆ ಸರಾಗವಾಗುವಂತೆ ಮಾಡಿ ಇಡೀ ಹೃದಯಕ್ಕೆ ವಿಶ್ರಾಂತಿಯನ್ನು ನೀಡುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.


4. ಅರಿವಿನ ಕುಸಿತ: ಯೋಗಾಭ್ಯಾಸವು ಕೇವಲ ಶರೀರಿಕ್ಕೆ ಮಾತ್ರ ಪ್ರಯೋಜನಕಾರಿಯಲ್ಲ; ಇದು ಮಾನಸಿಕ ಆರೋಗ್ಯವನ್ನು ಸಹ ವೃದ್ದಿಸುತ್ತದೆ. ಮಂತ್ರ ಜಪ, ಓಂ ಪಠಣ, ಸತ್ಸಂಗ, ಭಜನೆ, ಕೀರ್ತನೆಗಳ ಸಂಯೋಜನೆಯೊಂದಿಗೆ ನಿಯಮಿತ ಯೋಗಾಭ್ಯಾಸಗಳು ಅರಿವಿನ ಕಾರ್ಯ, ಸ್ಮರಣೆಯನ್ನು ವರ್ಧಿಸಬಹುದು ಮತ್ತು ಆಲ್ಝೈಮರ್, ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಮುಂತಾದ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಬಹುದು.

Related posts

ಶಾಸ್ತ್ರ, ದರ್ಶನ, ಮತ್ತು ಸಂಬಂಧ – ಯೋಗದ ಮಿತಿಯಲ್ಲಿ

admin
3 years ago

ವಸುಧೈವ ಕುಟುಂಬಕಂ ಮತ್ತು ಅಂತಾರಾಷ್ಟ್ರೀಯ ಯೋಗ ದಿನ

admin
3 years ago

ಯೋಗ ವಸಿಷ್ಠ – ಲೇಖನ ಸರಣಿ

admin
3 years ago
Exit mobile version