ಯೋಗವಾಣಿ | kannada yogavani
English Articles, Yoga Events & Activities

ಯೋಗಸ್ಪಂದನ

ಇಂಡಿಯನ್ ಯೋಗ ಅಸೋಸಿಯೇಷನ್ ಕರ್ನಾಟಕ ವಿಭಾಗವು ಕರ್ನಾಟಕದ ಪ್ರತಿ ಮನಗಳನ್ನು ಮುಟ್ಟುವ ಸಲುವಾಗಿ 2023 ರ ಜೂನ್ ತಿಂಗಳಿನಿಂದ ಆನ್ಲೈನ್ ವೆಬಿನಾರ್ ಮುಖಾಂತರ ಪ್ರತಿಯೊಬ್ಬರಿಗೂ ಅನುಕೂಲವಾಗುವ ಸಮಯದಲ್ಲಿ, ಅತ್ಯಂತ ಸರಳವಾಗಿ ಕನ್ನಡದಲ್ಲಿಯೇ ಕಾರ್ಯಾಗಾರಗಳನ್ನು ಪ್ರಾರಂಭ ಮಾಡಿದೆ.

ಕರ್ನಾಟಕದ ಐ. ವೈ. ಎ. ನ ಎಲ್ಲ ನೋಂದಾಯಿತ ಕೇಂದ್ರಗಳು ತಪ್ಪದೇ ಈ ಈ ಸುವರ್ಣ ಅವಕಾಶವನ್ನು ಬಳಸಿಕೊಂಡು, ಪ್ರತಿಯೊಬ್ಬರೂ ಭಾಗವಹಿಸಿ ಪ್ರತಿ ಕಾರ್ಯಗಾರದ ಎಲ್ಲ ಮಾಹಿತಿಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕಾಗಿ ಸವಿನಯ ಪ್ರಾರ್ಥನೆ.

  1. ಶ್ರೀಮತಿ ಮಾಲತಿ ವಿವೇಕ್
    ಮಹಿಳಾ ಯೋಗಕ್ಷೇಮ ತಜ್ಞರು ಹಾಗೂ
    ಸಂಚಾಲಕರು ಪ್ರಕಟಣೆ ವಿಭಾಗ- IYA ಕರ್ನಾಟಕ.
    ಪಿ.ಎಚ್‌.ಡಿ. ಸ್ಕಾಲರ್
    ಎಂ.ಎಸ್ಸಿ. ಯೋಗ ಜುಲೈ 17 ಮತ್ತು 18 ರಂದು
    ಬಂಜೆತನಕ್ಕೆ ಸಮಗ್ರ ಯೋಗ ಅನ್ನುವ ಕಾರ್ಯಗಾರವನ್ನು ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಬಂಜೆತನವು ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವು ದರಿಂದ ಯೋಗಾಭ್ಯಾಸದ ಮೂಖಾಂತರ ಬಂಜೆತನ ನಿವಾರಣೆ ಮಾಡಬಹುದು ಎನ್ನುವುದನ್ನು ಈ ಕಾರ್ಯಗಾರದಲ್ಲಿ ತಿಳಿಸಲಾಯಿತು.
  2. ಡಾ.ನಿತಿನ್ ಕುಮಾರ್ ಪಾಟೀಲ್
    ಅಸೋಸಿಯೇಟ್ ಪ್ರೊಫೆಸರ್ (ಯೋಗ ಥೆರಪಿ ಮತ್ತು ಆಯುರ್ವೇದ ಸಲಹೆಗಾರರು)
    ಇಂಟಿಗ್ರೇಟಿವ್ ಮೆಡಿಸಿನ್ & ರಿಸರ್ಚ್ ಕೇಂದ್ರ (CIMR)
    ರವರು ಋತುಬಂಧಕ್ಕೆ ಯೋಗ ಅಭ್ಯಾಸದಿಂದ ಯಾವ ರೀತಿ ಅನುಕೂಲವಾಗುತ್ತದೆ ಎನ್ನುದನ್ನು 30 ನಿಮಿಷಗಳ ಕಾಲ ಉದಾಹರಣೆ ಸಹಿತ ವೈಜ್ಞಾನಿಕವಾಗಿ ನಿರೂಪಣೆ ಮಾಡಿದರು.
  3. ಡಾ.ಸಂಜೀವ್ ಎಸ್ ಟೋನಿ ಎಂ ಡಿ (ಆಯು), (ಪಿಎಚ್‌ಡಿ), ಎಂಎಸ್ಸಿ, ಪಿಜಿಡಿವೈಎಸ್
    ಅಸೋಸಿಯೇಟ್ ಪ್ರೊಫೆಸರ್, ಸ್ವಸ್ಥಾವೃತ್ತದಲ್ಲಿ ಪಿಜಿ ಅಧ್ಯಯನ ವಿಭಾಗ
    HoD, ಸಂಶೋಧನಾ ವಿಧಾನ ಮತ್ತು ವೈದ್ಯಕೀಯ ಅಂಕಿಅಂಶಗಳ ವಿಭಾಗ ಇವರು ಸಹ ಪೌಷ್ಟಿಕಾಂಶ ಆಹಾರ ಮತ್ತು ಪಥ್ಯದಿಂದ ಬಂಜೆತನ ನಿವಾರಣೆ ಮಾಡುವುದನ್ನು ಅತ್ಯಂತ ಸುಲಲಿತವಾಗಿ ಹೇಳಿಕೊಟ್ಟರು.

Related posts

Yogoda Satsangha – ಯೋಗೋದ ಸತ್ಸಂಘ

admin
3 years ago

ಯೋಗವಾಸಿಷ್ಠದ ಕಥೆಗಳುಉಪಮನ್ಯುವಿನ ಕಥೆ

admin
3 years ago

ಸಚಿವಾಲಯ ವರದಿ

admin
3 years ago
Exit mobile version