ಭರತ ಭೂಮಿಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಹೆಸರು ಬೇಳೆಯ ಬಳಕೆ ದಾಖಲಾಗಿದ್ದು ಮನುಕುಲದೆ ಆರೋಗ್ಯಕ್ಕೆ ಬೇಕಾಗುವ ನಾನಾ ರೀತಿಯ ಪೋಷಣೆಗಳನ್ನು ಹೊಂದಿರುವ ಒಂದು ಬಗೆಯ ಪ್ರಾಚೀನ ದ್ವಿದಳ ಧಾನ್ಯ.
ಅತೀ ಹೆಚ್ಚು ಪ್ರೋಟೀನ್‌ ಹಾಗೂ ವಿವಿಧ ಖನಿಜಾಂಶಗಳನ್ನು ಒಳಗೊಂಡಿರುವುದರಿಂದಾ ದೇಹದಲ್ಲಿರುವ ಮೂಳೆ, ಚರ್ಮ, ಸ್ನಾಯುಗಳ ಆರೋಗ್ಯವನ್ನು ವೃದ್ಧಿಸಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಭದಿಸಿದ ಆನೇಕ ಕಾಯಿಲೆಗಳು ಕ್ಯಾನ್ಸರ್‌, ಚರ್ಮ ರೋಗಗಳೂ ಮುಂತಾದ ಹತ್ತು ಹಲವಾರು ಕಾಯಿಲೆಗಳಿರುವ ರೋಗಿಗಳಿಗೆ ಆರೋಗ್ಯವನ್ನು ಧೃಡಗೊಳಿಸಲು ಸಹಾಯ ಮಾಡುತ್ತದೆ.

ಹೆಸರು ಬೇಳೆ ದೋಸೆ ಮಾಡಲು ಬೇಕಾಗಿರುವ ಪದಾರ್ಥಗಳು

ಹೆಸರು ಬೇಳೆ 2 ಕಪ್‌
ಅಕ್ಕಿ ¼ ಕಪ್‌
ಶುಂಠಿ 1 ಇಂಚು
ಜೀರಿಗೆ 1 ಚಮಚ
ಕೊತ್ತಂಬರಿ ಸೊಪ್ಪು1\2 ಕಪ್‌
ಸಬ್ಬಕ್ಕಿ ಸೊಪ್ಪು 1ಕಟ್ಟು
ತೆಂಗಿನ ತುರಿ – 1\2 ಕಪ್‌
ಉಪ್ಪು ರುಚಿಗೆ ತಕ್ಕಂತೆ

ಹೆಸರು ಬೇಳೆ ದೋಸೆ ಮಾಡುವ ವಿಧಾನ

ಹೆಸರು ಬೇಳೆ ಹಾಗೂ ಅಕ್ಕಿಯನ್ನು 2-3 ಗಂಟೆಗಳ ಕಾಲ ನೆನೆಸಿ ಶುಂಠಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಹಿಟ್ಟಿಗೆ ಜೀರಿಗೆ, ತೆಂಗಿನತುರಿ, ಕೊತ್ತಂಬರಿಸೊಪ್ಪು, ಸಬ್ಬಕ್ಕಿ ಸೊಪ್ಪು ಹಾಕಿ ಮಿಕ್ಸ್‌ ಮಾಡಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಾವಲಿಯ ಮೇಲೆ ದೋಸೆ ಹಾಕಿ, ಎಣ್ಣೆ ಅಥವಾ ತುಪ್ಪವನ್ನು ಸವರಿ ಹೆಸರು ಬೇಳೆ ದೋಸೆಯ ಹಿಟ್ಟನ್ನು ಹೆಂಚಿನ ಮೇಲೆ ವೃತ್ತಾಕಾರವಾಗಿ ಉಯ್ಯಬೇಕು. ಕಾವಲಿಯ ಜೊತೆಗೆ ದೋಸೆಯು ಸಹ ಕೆಂಪಗೆ ಕಾದು ಗರಿಗರಿ ಆದಾಗ ಮತ್ತೊಂದು ಕಡ್ಡ ದೋಸೆಯನ್ನು ತಿರುವಿ ಹಾಕಬೇಕು. ಕೆಲವೇ ನಿಮಿಷಗಳಲ್ಲಿ ಸವಿಸವಿಯಾದ ಆ ದೋಸೆಯನ್ನು ಕಾಯಿ ಚಟ್ನಿಯೊಂದಿಗೆ ಮನೆಯವರೆಲ್ಲ ತಿನ್ನಬಹುದು. ತಿಂದ ನಂತರ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುವುದನ್ನು ಮರೆಯಬೇಡಿ.

ಶ್ರೀಮತಿ ರೇಖಾ ಎಂ ಎಸ್