“ವಸುಧೈವ ಕುಟುಂಬ”ಎಂದರೆ ಜಗತ್ತು ಒಂದು ಕುಟುಂಬ ಎಂದರ್ಥ. ಅಂತಾರಾಷ್ಟ್ರೀಯ ಯೋಗ ದಿನಕ್ಕೂ
ಜಗತ್ತು ಒಂದು ಕುಟುಂಬ ಎಂಬುದಕ್ಕೂ ಏನು ಸಂಬಂಧ? ಸಂಬಂದವಿದೆ- ಯೋಗ ಎಂದರೆ ಒಂದುಗೂಡಿಸು,
ಒಟ್ಟಾಗಿಸು ಎಂದರ್ಥ. ವಸುದೈವ ಎಂಬುದು ಸಂಸ್ಕೃತ ಪದವಾಗಿದ್ದು, ಇಡೀ ಪ್ರಪಂಚವು ಒಂದೇ ಕುಟುಂಬವಾಗಿದೆ
ಎಂದರ್ಥ. ಈ ಪರಿಕಲ್ಪನೆಯು ವೈದಿಕ ಗ್ರಂಥವಾದ ಮಹಾಉಪನಿಷದ್ (ಅಧ್ಯಾಯ 6 ಶ್ಲೋಕ 72) ರಲ್ಲಿ
ಹುಟ್ಟಿಕೊಂಡಿದೆ.
ವೈದಿಕಪಠ್ಯವಾದ ಹಿತೋಪದೇಶದಲ್ಲಿ –
ಅಯಂನಿಜಃಪರೋವೇತಿಗಣನಾಲಘುಚೇತಸಾಮ್ |
ಉದಾರಚರಿತಾನಾಂತುವಸುದೈವಕುಟುಂಬಕಮ್|
ಸಣ್ಣಮನಸ್ಸಿನವರು ಇದು ನನ್ನದು ಅವನದು ಎಂದು ಹೇಳುತ್ತಾರೆ. ಬುದ್ದಿವಂತರು ಇಡೀ ಜಗತ್ತೇ
ಒಂದು ಕುಟುಂಬ ಎಂದು ನಂಬುತ್ತಾರೆ.
ಈ ನಂಬಿಕೆಯು ಜಗತ್ತಿನ ವಿವಿಧ ರೀತಿಯ ಸಮಾಜಗಳ ನಡುವಿನ ಶಾಂತಿ ಮತ್ತು ಸೌರ್ಹರ್ದತೆಯ ಬಗ್ಗೆ
ಮಾತ್ರವಲ್ಲ, ಆದರೆ ಇಡೀ ಜಗತ್ತು ಹೇಗದರೂ ಕುಟುಂಬದಂತೆ ಕೆಲವು ನಿಯಮಗಳ ಮೂಲಕ ಬದುಕಬೇಕು ಎಂಬ
ಸತ್ಯವನ್ನು ತಿಳಿಸುತ್ತದೆ.
ಈ ಕಲ್ಪನೆಯನ್ನು ಆಲೋಚಿಸುವ ಮೂಲಕ ಮತ್ತು ಕನಿಷ್ಠ ಅದರಂತೆ ಬದುಕಲು ಅದನ್ನು
ನಮ್ಮಜೀವನದಲ್ಲಿ ಆಭ್ಯಾಸಮಾಡಲು ಪ್ರಯತ್ನಿಸುವ ಮೂಲಕ ನಾವು ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ
ಮಾಡಬಹುದು. ವಸುಧೈವಕುಟುಂಬಕಂ ಎಂಬುದು ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯಲ್ಲಿ
ಶತಮಾನಗಳಿಂದ ಬಳಕೆಯಲ್ಲಿರುವ ಸಂಸ್ಕೃತ ನುಡಿಗಟ್ಟು. ಇದು ಮಹಾಭಾರತ ಮತ್ತು ಉಪನಿಷತ್‌ಗಳಂತಹ
ಪ್ರಾಚೀನ ಭಾರತೀಯ ಗ್ರಂಥದಲ್ಲಿ ಹುಟ್ಟಿಕೊಂಡಿದೆಯೆಂದು ನಂಬಲಾಗಿದೆ. ಇದು ಸಾರ್ವರ್ತಿಕ
ಸಹೋದರತ್ವ ಮತ್ತು ಎಲ್ಲಾ ಜೀವಿಗಳ ಪರಸ್ಪರ ಸಂಬಂಧದ ಕಲ್ಪನೆಯನ್ನು ಒತ್ತಿ ಹೇಳುತ್ತದೆ.
“ಜಗತ್ತು ಒಂದುಕುಟುಂಬ ಎಂಬುದು”ಮಹಾಉಪನಿಷತ್ಗಾದೆಯ ಮೂಲವಾಗಿದ್ದರೂ, ಅದು ಹಿಂದೂ
ಸಾಹಿತ್ಯ ಮತ್ತು ತತ್ತ್ವಶಾಸ್ತ್ರದ ಮೇಲೆ ಪ್ರಭಾವ ಬೀರಿದೆ. ಭಾಗವತ ಪುರಾಣವು ವಾಸುದೇವ ಕುಟುಂಬಕಮ್
ಅನ್ನುಉನ್ನತವಾದ ವೇದಾಂತಿಕ ಚಿಂತನೆ ಎಂದು ವಿವರಿಸುತ್ತದೆ. ವಸುಧಾ ಎಂದರೆ ಭೂಮಿ, ಪ್ರಪಂಚ,
ಬ್ರಹ್ಮಾಂಡ ಅಥವಾ ವಾಸ್ತವಿಕತೆಯೆಲ್ಲವೂ ಒಂದೇ. ವಾಸುದೇವಕುಟುಂಬ ಪದವು ತನ್ನ ಆಧ್ಯಾತ್ಮಿಕ
ಪ್ರಯಾಣದಲ್ಲಿ, ಅತ್ಯುನ್ನತ ಮಟ್ಟವನ್ನು ತಲುಪಿದ ಮತ್ತು ಇನ್ನು ಮುಂದೆ ಭೌತಿಕ ವಸ್ತುಗಳಿಗೆ ಲಗತ್ತಿಸದ
ಯೋಗಿಯನ್ನು ವಿವರಿಸುತ್ತದೆ.
ವೇಗವಾಗಿ ಬೆಳೆಯುತ್ತಿರುವ ನಗರಪ್ರದೇಶಗಳು, ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆಬರುತ್ತಿರುವ
ಜನರ ಬದುಕಿಗೆ ವೇಗದ ಮತ್ತು ಅಂತರ್ ಸಂಪರ್ಕಿತ ಜಗತ್ತಿನಲ್ಲಿ, ವಸುಧೈವ ಕುಟುಂಬಕಂ ಸಂದೇಶವು
ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ರಾಷ್ಟ್ರಗಳು, ಸಂಸ್ಕೃತಿಗಳು ಮತ್ತು ಜನರ ನಡುವಿನಲಿ,
ಮಸುಕಾಗುತ್ತಿರುವ ಸಾಮರಸ್ಯ, ಗಡಿಗಳಲ್ಲಿ ಕಲಹ, ಮಸುಕಾಗುತ್ತಿರುವ ಜ್ಞಾನ ಇಂತಹ ಜಾಗತಿಕ ಹಳ್ಳಿಯಲ್ಲಿ
ನಾವು ವಾಸಿಸುತ್ತಿದ್ದೇವೆ. ಆದ್ದರಿಂದ ವಸುಧೈವ ಕುಟುಂಬಕಂ ತತ್ತ್ವವನ್ನುಅಳವಡಿಸಿಕೊಳ್ಳುವುದು ಮತ್ತು
ಪ್ರತಿಯೊಬ್ಬರನ್ನು ಸಮಾನವಾಗಿ ಘನತೆ ಮತ್ತು ಸಮಗ್ರತೆಯಿಂದ ಕಾಣುವ ಜಗತ್ತನ್ನು ರಚಿಸಲು ಶ್ರಮಿಸುವುದು
ಅನಿವಾರ್ಯವಾಗುತ್ತದೆ.
ವಸುಧೈವ ಕುಟುಂಬಕಂ ಪ್ರಾಮುಖ್ಯತೆ
ವಸುಧೈವ ಕುಟುಂಬಕಂನ ಮೂಲತತ್ವಗಳು ಎಲ್ಲಾ ರಂಗಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ
ರಸ್ತೆಸು ರಕ್ಷತೆ ಕಾಪಾಡುವುದರಲ್ಲಿ, ಸಾರ್ವಜನಿಕ ಕಚೇರಿಯಲ್ಲಿ, ಶಾಲಾ ಕಾಲೇಜುಗಳಲ್ಲಿ ಇದರ ತತ್ವಗಳನ್ನು
ಅಳವಡಿಸಿಕೊಳ್ಳುವುದರಿಂದ ಯುವಜನಾಂಗದಲ್ಲಿ ಸಾಮರಸ್ಯ, ಶಾಂತಿ ಮೂಡಿಸಿ ನೆಮ್ಮದಿ ಬದುಕನ್ನು ನಡೆಸಲು
ಸಹಾಯಕಾರಿಯಾಗುತ್ತದೆ.
ಇಂದು ರಸ್ತೆ ಅಪಘಾತಗಳು ಸಾಕಷ್ಟು ಹೆಚ್ಚಾಗಿದೆ. ರಸ್ತೆಗಳಲ್ಲಿ, ಅಪಘಾತಗಳು ಮಾಮೂಲಿಯಾಗಿವೆ.
ಇಂದು ರಸ್ತೆಗಳು ತುಂಬಾ ಜನ ದಟ್ಟಣೆಯಿಂದ ಕೂಡಿದ್ದು, ಅನೇಕ ಸಮಸ್ಯೆಗಳು ಉದ್ಬವಿಸುತ್ತವೆ. ರಸ್ತೆ
ಅಪಘಾತಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ರಸ್ತೆ ಸುರಕ್ಷತೆಯು ಏಕಕ ಮಾರ್ಗವಾಗಿದೆ. ರಸ್ತೆ
ಸುರಕ್ಷತೆಯನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಈ ಅಪಘಾತಗಳನ್ನು ಹೆಚ್ಚಿನ ಪ್ರಮಾಣದಲ್ಲಿ
ಕಡಿಮೆಮಾಡಬಹುದು.
ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಅಗತ್ಯನಿಯಮಗಳನ್ನು ಮಾಡಲಾಗಿದೆ ಮತ್ತು ಇದನ್ನು
ರಸ್ತೆ ಸುರಕ್ಷತೆ ಎಂದು ಕರೆಯಲಾಗುತ್ತದೆ. ಪಾದಚಾರಿಗಳು ಮತ್ತು ರಸ್ತೆಗಳಲ್ಲಿ ವಾಹನ ಚಲಾಯಿಸುವ ಜನರು ರಸ್ತೆ
ನಿಯಮಗಳನ್ನು ಪಾಲಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವುದರಿಂದ ರಸ್ತೆಅಪಘಾತಗಳು
ಕಡಿಮೆಯಾಗುತ್ತವೆ ಮತ್ತು ನಾವೆಲ್ಲರೂ ಸುರಕ್ಷಿತ ರಸ್ತೆಗಳಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.
ರಸ್ತೆ ಸುರಕ್ಷತಾ ನಿಯಮಗಳು ಮತ್ತು ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು
ತಡೆಗಟ್ಟುವುದು ರಸ್ತೆ ಸುರಕ್ಷತೆಯಾಗಿದೆ. ಪ್ರಯಾಣಿಕರು, ಪಾದಚಾರಿಗಳು ಮತ್ತು ಚಾಲಕರು ಸುರಕ್ಷಿತವಾಗಿರಲು
ಕೌಶಲ್ಯಪೂರ್ಣ ಮತ್ತು ಎಚ್ಚರಿಕೆಯ ಚಾಲನೆಯ ಅಗತ್ಯವು ರಸ್ತೆ ಸುರಕ್ಷತೆಯ ಪ್ರಮುಖ ಅಂಶವಾಗಿದೆ.
ರಸ್ತೆ ಅಪಘಾತಗಳನ್ನು ತಪ್ಪಿಸಲು ಉತ್ತಮ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಸಹಮುಖ್ಯವಾಗಿದೆ.
ಸಾರ್ವಜನಿಕ ವಲಯದಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ಕೆಲಸಕ್ಕೆ ಬರುವ
ಪ್ರತಿಯೊಬ್ಬ ಸಾರ್ವಜನಿಕರನ್ನು ನಮ್ಮವರು ಎಂಬ ಬಾವನೆ ಬೆಳೆಸಿಕೊಳ್ಳುವುದು, ಬಂದಂತ ಸಾರ್ವಜನಿಕರಿಗೆ
ಕಾನೂನ ಚೌಕಟ್ಟಿನಲಿ ಎಷ್ಟು, ಸಾಧ್ಯವೊ ಅಷ್ಟು ಸಹಾಯಮಾಡುತ್ತ, ಕರ್ಮಯೋಗದ ತತ್ವಗಳಾದ ಕರ್ತವ್ಯಪ್ರಜ್ಞೆ:
ರಾಗದ್ವೇಷಗಳಿಲ್ಲದೆ ಪ್ರತಿಫಲಗಳ ಅಪೇಕ್ಷೆ ಇಲ್ಲದೆ ಕರ್ತವ್ಯ ನಿರ್ವಹಿಸುವುದು, ಹಾಗೆ ಶಾಲಾ ಕಾಲೇಜುಗಳಲ್ಲಿ
ಮಕ್ಕಳಿಗೆ ಯುವಜನಾಂಗಕ್ಕೆ, ಮಾನವೀಯ ಮೌಲ್ಯಗಳ ಬಗ್ಗೆ, ಪ್ರಕೃತಿಯ ಬಗ್ಗೆ ಪರಿಸರ ರಕ್ಷಣೆ ಬಗ್ಗೆ
ಅರಿವು ಮೂಡಿಸುವುದು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ದುಶ್ಚಟಗಳಿಗೆ ಬಲಿಯಾಗದಂತೆ
ಮಾರ್ಗದರ್ಶನ ಮಾಡುವುದು ಇವೆಲ್ಲವೂ ಯೋಗ ಮತ್ತು ವಸುಧೈವ ಕುಟುಂಬದ ತತ್ವಗಳು.
ವಸುಧೈವ ಕುಟುಂಬಕದ ತತ್ವಶಾಸ್ತ್ರವನ್ನು ಅಳವಡಿಸಿಕೊಳ್ಳುವುದು
ವಿವಿಧ ಜನರ ಸಂಸ್ಕೃತಿಗಳು ಮತ್ತು ನಂಬಿಕೆಗಳಲ್ಲಿನ ವ್ಯತ್ಯಾಸಗಳನ್ನು ಸ್ವೀಕರಿಸುವುದು. ಇತರ ಜನರ
ದೃಷ್ಟಿಕೋನಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ಪ್ರೀತಿ ಮತ್ತು
ಸಕಾರಾತ್ಮಕತೆಯನ್ನು ಹರಡಿ ಅಗತ್ಯವಿರುವ ಇತರರಿಗೆ ಸಹಾಯ ಮಾಡುವುದು, ಎಲ್ಲಾ ಜೀವಿಗಳಲ್ಲಿ
ಮಾನವೀಯತೆಯ ಏಕತೆಯನ್ನು ತೋರುವುದು, ಎಲ್ಲಾ ಜನರ ಪರಸ್ಪರ ಸಂಬಂಧದ ಹೀಗೆ, ನಿಮ್ಮಜ್ಞಾನ ಮತ್ತು
ನಂಬಿಕೆಗಳನ್ನು ಹಂಚಿಕೊಳ್ಳುವುದು ಇತರರನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸುವುದು-
ಈ ತತ್ವಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೈವಿಧ್ಯತೆಯನ್ನು
ಮೌಲೀಕರಿಸುವ ಮತ್ತು ಗೌರವಿಸುವಜಗತ್ತನ್ನು ರಚಿಸಲು ನೀವು ಸಹಾಯ
ಮಾಡಬಹುದು ಮತ್ತು ಪ್ರತಿಯೊಬ್ಬರೂ ಪರಸ್ಪರ ಸಂಬಂಧ ಮತ್ತು ಸಂಪರ್ಕದ ಭಾವನೆಯನ್ನು ಅನುಭವಿಸುತ್ತಾರೆ.
ವಸುಧೈವ ಕುಟುಂಬಕಮ್ಂನ ತತ್ತ್ವಶಾಸ್ತ್ರ ಯೋಗದ ಗುರಿಯಾದ ಏಕತೆಯಂತೆಯೇ ಜಗತ್ತಿಗೆ
ಪ್ರಕೃತಿಯಲ್ಲಿರುವ ಎಲ್ಲಾ ಜಲಚರಪ್ರಾಣಿಗಳು ಮತ್ತು ಸಸ್ಯರಾಶಿಗಳು ಎಲ್ಲವು ಒಂದೇ ಎಂಬ ಭಾವನೆಯನ್ನು
ಮಾನವರಲ್ಲಿ ಬೆಳೆಸುತ್ತದೆ. ಭೂಮಿಯ ಮೇಲೆ ಮತ್ತು ವಿಶ್ವದಲ್ಲಿ ಎಲ್ಲ ಜೀವಗಳ ಮೌಲ್ಯವನ್ನು, ಸಾಮರಸ್ಯ ಘನತೆ
ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.ಸುಸ್ಥಿರತೆ ತಿಳುವಳಿಕೆ ಮತ್ತು ಶಾಂತಿಯನ್ನು ಮುನ್ನಡೆಸುವ ಮೂಲಕ
ಜಗತ್ತನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯು ಜಾಗತಿ ಸಮುದಾಯದ ಸದಸ್ಯ
ಮತ್ತು ನಾವು ಪರಸ್ಪರ ಗೌರವ, ಘನತೆ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು ಎಂಬ
ಸಂದೇಶವನ್ನುಈ ನುಡಿ ಗಟ್ಟುರವಾನಿಸುತ್ತದೆ. ಈ ತತ್ವವು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ಮಹತ್ವವನ್ನು
ಎತ್ತಿ ತೋರಿಸುತ್ತದೆ ಮತ್ತು ಯೋಗ ಶಾಸ್ತ್ರದ ಉದ್ದೇಶದಂತೆ ಎಲ್ಲಾ ರಾಷ್ಟ್ರಗಳು ಮತ್ತು ಸಂಸ್ಕೃತಿಗಳ ನಡುವೆ ಶಾಂತಿ
ಏಕತೆ ಮತ್ತು ಸಹಕಾರವನ್ನು ಉತ್ತೇಜಿಸುತ್ತದೆ. ಅಂತರ್ಸಂಪರ್ಕಿತ ಜಾಗತೀನಲ್ಲಿ ಹೆಚ್ಚುತ್ತಿರುವ ಬಡತನ,
ಅಸಮಾನತೆ ಮತ್ತು ಭಯೋತ್ಪಾದನೆ, ಜಾತಿ ಧರ್ಮ ಸಂಘರ್ಷದಂತಹ ಸಾವಲುಗಳನ್ನು ಎದುರಿಸುತ್ತಿರುವ ಕಾರಣ
ವಸುಧೈವ ಕುಟುಂಬಕಂ ಸಂದೇಶವು ಎಂದಿಗಿಂತಲೂ ಹೆಚ್ಚುಪ್ರಸ್ತುತವಾಗಿದೆ.
ವಸುದೈವಕುಟುಂಬಕಂಮೂಲ:ತತ್ವಗಳು ಉತ್ತಮವಾದ ಜಗತ್ತನ್ನುನಿರ್ಮಿಸುವಲ್ಲಿ ಪ್ರತಿಯೊಬ್ಬ ವ್ಯಕ್ತಿಯ
ಪಾತ್ರವಿದೆ ಎಂದು ಪ್ರಬಲವಾದ ಜ್ಞಾಪನೆಯನ್ನುನೀಡುತ್ತದೆ. ಉತ್ತಮ ಭವಿಷ್ಯಕ್ಕಾಗಿ
ಮಾರ್ಗಸೂಚಿಯನ್ನು ನೀಡುತ್ತವೆ. ಏಕತೆ, ಸಹಕಾರ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸುವ ಮೂಲಕ ನಾವು
ಸಂಘರ್ಷಗಳನ್ನು ಪರಿಹರಿಸಲು ಮತ್ತು ಅಸಮಾನತೆಗಳನ್ನು ಕಡಿಮೆಮಾಡಲು ಕೆಲಸಮಾಡಬಹುದು. ಇದು ಹೆಚ್ಚು
ಶಾಂತಿಯುತ, ಸಮರಸ್ಯ ಮತ್ತು ಒಳಗೊಳ್ಳುವ ಜಗತ್ತನ್ನುಸೃಷ್ಟಿಸುತ್ತದೆ. ಆದ್ದರಿಂದ 2023ರ ಅಂತಾರಾಷ್ಟ್ರೀಯ
ಯೋಗದಿವಸದ ಘೋಷಣೆ “ವಸುದೈವಕುಟುಂಬ” ಇದರ ತತ್ವಗಳು ಮತ್ತು ಯೋಗಶಾಸ್ತ್ರದ ತತ್ವಗಳು ಒಂದೇ
ಆಗಿರುವುದರಿಂದ ಈ ಸಾರಿಯ ಘೋಷಣೆ ಇಂದಿನ ಸಮಾಜದ ಅಂಕುಡೊಂಕುಗಳನ್ನು ತಿದ್ದಲು
ಸಹಾಯಕಾರಿಯಾಗುವುದರಲ್ಲಿ ಎರಡು ಮಾತಿಲ್ಲ.
ವಸುಧೈವಕುಟುಂಬಕಂ ತತ್ತ್ವವು ಇಂದು ಹೆಚ್ಚು ಪ್ರಸ್ತುತವಾಗಿದೆ. ಏಕೆಂದರೆ ಇದು ಎಲ್ಲಾ
ಮಾನವ ಜನಾಂಗ, ಧರ್ಮ ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಏಕತೆ ಮತ್ತು ಸಂಪರ್ಕದ ಕಲ್ಪನೆಯನ್ನು
ಒತ್ತಿಹೇಳುತ್ತದೆ.ಶಾಂತಿಯನ್ನುಉತ್ತೇಜಿಸುತ್ತದೆ.ಎಲ್ಲಾಜನರು ಒಂದು ಜಾಗತಿಕ ಕುಟುಂಬದ ಭಾಗವೆಂದು
ಗುರುತಿಸುವ ಮೂಲಕ ಇದು ಸಹಾನುಭೂತಿಯ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.ಅವುಗಳ ಪರಸ್ಪರ ಸಂಬಂಧದ
ಮೌಲ್ಯವನ್ನು ಧೃಡೀಕರಿಸುತ್ತದೆ.
ಡಾ ಧನ್ವಂತರಿ ಎಸ್ ಒಡೆಯರ್
ಎಂ ಎಸ್ಸಿ,(ಯೋಗ) ಪಿ.ಹೆಚ್ ಡಿ (ಯೋಗ)
ಎಂ ಎ., ಡಿ ಎಂ ಇ., ಡಿ ಫಾರ್ಮ್
ಯೋಗ ತಜ್ಞರು
ಅಧ್ಯಕ್ಷರು
ಸಂಯಮ ಟ್ರಸ್ಟ್ ಯೋಗ ಮಹಾವಿದ್ಯಾಲಯ
ಡಾ ಧನ್ವಂತರಿ ಎಸ್ ಒಡೆಯರ್,
ಎಂ ಎಸ್ಸಿ,(ಯೋಗ) ಪಿ.ಹೆಚ್ ಡಿ (ಯೋಗ)
ಎಂ ಎ., ಡಿ ಎಂ ಇ., ಡಿ ಫಾರ್ಮ್