ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್ ಅಂಶವು ಅಧಿಕವಾಗಿರುವುದರಿಂದ ಹೃದಯ ರಕ್ತ ನಾಳದ ಕಾಯಿಲೆ ಇರುವವರಿಗೆ ಒಳ್ಳೆಯದು. ಸಕ್ಕರೆ ಖಾಯಿಲೆ ಅಥವಾ ಮಧುಮೇಹಿಗಳಿಗೆ ಉತ್ತಮ ಆಹಾರ.
ಬೊಜ್ಜು ಕರಗಿಸುವಲ್ಲಿ ಹಾಗೂ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಈ ಬರ್ನಾಡ್ ರಾಗಿಯಲ್ಲಿಅಧಿಕ ಪ್ರಮಾಣದಲ್ಲಿ ಕಬ್ಬಿಣವಿದ್ದರೆ ಇದರ ಜೊತೆಗೇ ಸೇರಿಸುವ ಉದ್ದಿನಬೇಳೆಯಲ್ಲಿ ಅಗತ್ಯ ಪೋಷಕಾಂಶಗಳ ಜೊತೆಗೆ ಹೈ ಪ್ರೋಟೀನ್ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ.
ಬೇಕಾದ ಪದಾರ್ಥಗಳು :
- ಉದ್ದಿನ ಬೇಳೆ 1/2 ಕಪ್ .
- ಬರ್ನಾಡ್ ರಾಗಿ 1/3 ಕಪ್.
- ತುಪ್ಪ ಸ್ವಲ್ಪ ಹಾಗೂ ಉಪ್ಪು ರುಚಿಗೆ ತಕ್ಕಷ್ಟು ಇರಲಿ.
ಬರ್ನಾಡ್ ರಾಗಿ ಇಡ್ಲಿ ಮಾಡುವ ವಿಧಾನ:
ಬರ್ನಾಡ್ ರಾಗಿಯನ್ನು ಚೆನ್ನಾಗಿ ತೊಳೆದು ಎಂಟು ಹತ್ತು ಗಂಟೆಗಳ ಕಾಲ ನೆನೆಸಬೇಕು.
ಉದ್ದಿನಬೇಳೆಯನ್ನು ಒಂದು ಗಂಟೆಕಾಲ ನೆನೆಸಬೇಕು
ಎರಡನ್ನು ಬೇರೆ ಬೇರೆಯಾಗಿ ರುಬ್ಬಿ, ಹಿಟ್ಟನ್ನು ಉಪ್ಪು ಹಾಕಿ ಮಿಕ್ಸ್ ಮಾಡಿ ಎಂಟು ಗಂಟೆಗಳ ಕಾಲ ನೆನೆಯಲು ಬಿಡಬೇಕು. ಆನಂತರ ಚೆನ್ನಾಗಿ ಕಲಿಸಿ ಇಡ್ಲಿ ತಟ್ಟೆಗಳಿಗೆ ತುಪ್ಪ ಸವರಿ ಹಿಟ್ಟನ್ನು ಹಾಕಿ 10 15 ನಿಮಿಷ ಕಾಲ ಬೇಯಿಸಬೇಕು.
ತಯಾರಾದ ಇಡ್ಲಿಯನ್ನು ಸಾಂಬಾರ್ ಅಥವಾ ಚಟ್ನಿ ಜೊತೆ ಸವಿಯಬಹುದು.
