ಇಂಡಿಯನ್ ಯೋಗ ಅಸೋಸಿಯೇಷನ್ IYA ನ ಕಾರ್ಯಕಾರಿ ಮಂಡಳಿಯ 36 ನೇ ಸಭೆಯು ಜುಲೈ 3, 2023 ರಂದು, ಸಂಜೆ 5.30 ರಿಂದ 6.00 ಗಂಟೆಯವರಗೆ ಆನ್‌ಲೈನ್‌ನಲ್ಲಿ ನಡೆಯಿತು.

ಸಭೆಯಲ್ಲಿ ಅಧ್ಯಕ್ಷರಾದ ಡಾ ಹಂಸಜಿ ಯೋಗೇಂದ್ರ, ಉಪಾಧ್ಯಕ್ಷ ಶ್ರೀ ಎಸ್ ಶ್ರೀಧರನ್, ಪ್ರಧಾನ ಕಾರ್ಯದರ್ಶಿ ಶ್ರೀ ಸುಬೋಧ ತಿವಾರಿ, ಬ್ರಹ್ಮಚಾರಿಣಿ ಶೋಭಾ, ಜಂಟಿ ಕಾರ್ಯದರ್ಶಿ ಡಾ ಆನಂದ ಬಾಲಯೋಗಿ ಭವಾನಾನಿ, ಸ್ಥಾಯಿ ಪ್ರಕಟಣೆಗಳ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಪದ್ಮಿನಿ ರಾಥೋಡ್ , ಪ್ರಚಾರ ಮತ್ತು PR ಸಮಿತಿ, ಖಜಾಂಚಿ ಶ್ರೀ ಕೆ.ಸಿ. ಜೈನ್ ಉಪಸ್ಥಿತರಿದ್ದರು.
ಸ್ಥಾಯಿ ಹಣಕಾಸು ಸಮಿತಿಯ ನಿರ್ದೇಶಕರಾದ ಶ್ರೀ ಪಿ.ಸಿ .ಕಪೂರ್ ಮತ್ತು ಶೈಕ್ಷಣಿಕ ಮತ್ತು ಮಾನ್ಯತಾ ಸಮಿತಿಯ ನಿರ್ದೇಶಕರಾದ ಡಾ ಗಣೇಶ್ ರಾವ್ ಸಭೆಯನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭ ಮಾಡಿದರು .
ಶ್ರೀ ಸುಬೋಧ್ ತಿವಾರಿಯವರು ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಎಲ್ಲರನ್ನು ಪರಿಚಯಿಸಿ ಸ್ವಾಗತಿಸಿದರು ಮತ್ತು ಸಭೆಯನ್ನು ಪ್ರಾರಂಭಿಸಲು ಗೌರವಾನ್ವಿತ ಅಧ್ಯಕ್ಷರಿಗೆ ಆಮಂತ್ರಣ ನೀಡಿದರು.
35 ನೇ ಕಾರ್ಯಕಾರಿ ಮಂಡಳಿ ಸಭೆಯ ನಡಾವಳಿಗಳನ್ನು ಅನುಮೋದಿಸಲಾಯಿತು.
IYA ಯ ಅಂತರರಾಷ್ಟ್ರೀಯ ಕೋಶದ ಸ್ಥಾಪನೆ, ಹಣಕಾಸು ಬಲಪಡಿಸುವ ಬಗ್ಗೆ ಚರ್ಚೆಗಳು ನಡೆದವು.
2023ರ ನವೆಂಬರ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ಶೃಂಗಸಭೆ 2023, ಪ್ರಕಾರ ಹೊಸ ಸಾಂಸ್ಥಿಕ ನೀತಿ ಸಮಿತಿ (IEC) ಅನ್ನು ಸುಧಾರಿಸುವುದು, ಸ್ಟ್ಯಾಂಡರ್ಡ್ ರಿಸರ್ಚ್ ಕಮಿಟಿಯಿಂದ ICMR ಮಾನದಂಡ, ರಾಜ್ಯ ಅಧ್ಯಾಯ ಸಮಿತಿಗಳು ಮತ್ತು IYA ಮತ್ತು ಇತರರಿಗೆ ಅಸೋಸಿಯೇಟ್ ಸೆಂಟರ್ ಸದಸ್ಯತ್ವ ಶುಲ್ಕ ಹಂಚಿಕೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ಇದರ ಜೊತೆಗೇ ಯುಪಿಬಿಟಿವಿಪಿ ಬ್ರಜ್ ಇವೆಂಟ್, IYAಯ ಸಂಯೋಜಿತ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಮತ್ತು ಭಾಗವಹಿಸಲು ಎಲ್ಲಾ ಸದಸ್ಯರು ಒಪ್ಪಿಗೆ ಯನ್ನೂ ಸೂಚಿಸಿದರು.
ಆ ನಂತರ ಡಾ.ಆನಂದರವರು ಅಂತರಾಷ್ಟ್ರೀಯ ಯೋಗ ಶೃಂಗಸಭೆಯ ವೇಳಾಪಟ್ಟಿಯನ್ನು ವಿವರವಾಗಿ ಚರ್ಚಿಸಿದರು ಮತ್ತು ಈ ಶೃಂಗಸಭೆಯನ್ನು ದೇವಭೂಮಿ ಉತ್ತರಾಖಂಡದ ಹರಿದ್ವಾರದಲ್ಲಿರುವ ದೇವ್ ಸಂಸ್ಕೃತಿ ವಿಶ್ವವಿದ್ಯಾಲಯ, ಶಾಂತಿಕುಂಜ್ ನಲ್ಲಿ ನಡೆಸಲು ನಿರ್ಧರಿಸಲಾಯಿತು.
ಡಾ ಗಣೇಶ್ ರಾವ್ ಅವರು SAAC ಸಮಿತಿಯ ಉಪಸಮಿತಿಗಳಲ್ಲಿ ಕೆಲಸದ ಪ್ರಗತಿಯನ್ನು ನವೀಕರಿಸಿದರು.

ಈ 35 ನೇ ಕಾರ್ಯಕಾರಿ ಮಂಡಳಿ ಸಭೆಯನ್ನು ಶಾಂತಿ ಮಂತ್ರ ಪಠಣೆಯೊಂದಿಗೆ ಮುಕ್ತಾಯ ಗೊಳಿಸಲಾಯಿತು.